ನಾಗರ ಹಾವೆ..

ನಾಗರ ಹಾವೆ ಹಾವೊಳು ಹೂವೆ
ಬಾಗಿಲ ಬಿಲದಲಿ ನಿನ್ನಯ ಕಾವೆ

ಕೈಗಳ ಮುಗಿವೆ ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೊ ಬೇಗ
ಹೊಳಹಿನ ಹೊಂದಲೆ ತೂಗೊ ನಾಗ

ಕೊಳಲನ್ ಊದುವೆ ಲಾಲಿಸು ರಾಗ
ನೀ ನೀ ನೀ ನೀ ನೀ ನೀ

ಎಲೆ ನಾಗಣ್ಣ ಹೇಳೆಲೊ ನಿನ್ನ
ತಲೆಯಲಿ ರನ್ನವಿಹ ನಿಜವನ್ನ

ಬಲು ಬಡವಗೆ ಕೊಪ್ಪರಿಗೆ ಚಿನ್ನ
ತಾ ತಾ ತಾ ತಾ ತಾ ತಾ

ಬರಿ ಮೈ ತಣ್ಣಗೆ ಮನದಲಿ ಬಿಸಿ ಹಗೆ
ಎರಡೆಳೆ ನಾಲಗೆ ಇದ್ದರು ಸುಮ್ಮಗೆ

ಎರಗುವೆ ನಿನಗೆ ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ

ಪಂಜೆ ಮಂಗೇಶರಾಯ

Leave a Reply

Your email address will not be published. Required fields are marked *