ಬಣ್ಣದ ತಗಡಿನ ತುತ್ತೂರಿ…
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು
ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು
– ಜಿ.ಪಿ. ರಾಜರತ್ನಂ
Read Moreಕನಡ ನಾಡಿನ ಕಂದನಿಗೆ
ಕನ್ನಡ ನಾಡಿನ ಕಂದ!
ನಿನ ಕೊರಲಿಗಿದು ಚಂದ!
ನಮ್ಮ ನಾಡಿನಲಿ ನಿಂದ
ಕವಿಗಳ ಬೊಕ್ಕಸದಿಂದ
ನಿನಗೆಂದಾರಿಸಿ ತಂದ
ಕಾವ್ಯಮಾಲೆಯಿದು ಕಂದ!
ಕನ್ನಡ ನಾಡಿನ ಕಂದ!
ನಿನ್ನ ಕೊರಲಿಗಿದು ಚಂದ!
ಬರೆದವರು: ಜಿ. ಪಿ. ರಾಜರತ್ನಂ
ಪುಸ್ತಕ: ಕಂದನ ಕಾವ್ಯಮಾಲೆ
ಪ್ರಕಟಿತ ವರ್ಷ: ೧೯೩೩
ಪ್ರಕಟಿಸಿದವರು: ರಾಮಮೋಹನ ಕಂಪೆನಿ
ಅರಳಿದ ಹೂವುಗಳು ಮೂಡಿದ ರೇಖೆಗಳು
ಚಿಣ್ಣರಿಗೆ ಚಿತ್ರ ಸಹಿತ ಕನ್ನಡ ಪದಗುಚ್ಛಗಳನ್ನು ‘ತನುಶ್ರೀ ಎಸ್ ಎನ್’ ತಮ್ಮ ತಾಣದಲ್ಲಿ ಹೊರತಂದಿದ್ದಾರೆ.
ಈ ಚಿತ್ರಗಳು ಮತ್ತು ಕೆಲವೊಂದು ಸಾಹಿತ್ಯ ಕ್ರಿಯೇಟೀವ್ಕಾಮನ್ಸ್ ಪರವಾನಗಿ ಅಡಿ ಲಭ್ಯವಿದ್ದು, ಇತರರೊಡನೆ ಹಂಚಿಕೊಳ್ಳಲೂ ಬಹುದು.
Read Moreಸಂತಮ್ಮಣ್ಣ
ಕಲ್ಯಾಣ ಸೇವೆ ಜೇಬಿನ ಬುಡದಲಿ
ಪುಟ್ಟಾಣಿ ಪುರಿಯು ಮೇಲೊಂದಿಷ್ಟು
ಗೋಲಿಬಳಪ ಮತ್ತೊಂದಿಷ್ಟು
ಬಂದ ಬಂದ ಸಂತಮ್ಮಣ್ಣ
ಪಠಾಸು ಪೆಟ್ಲು ಒಳಜೇಬಲ್ಲಿ
ಕಾಸಿನ ಸಾಲು ಕಳ ಜೇಬಲ್ಲಿ
ಚೆಂಡು ದಾಂಡು ಎಡಬಲದಲ್ಲಿ
ಬಂದ ಬಂದ ಸಂತಮ್ಮಣ್ಣ
ಅಮ್ಮನ ಹಾರ ಉಬ್ಬಿದ ಎದೆಗೆ
ಬಿದಿರಿನ ಕೊಳಲು ಗೆಜ್ಜೆಯ ಒಳಗೆ
ಹದ್ದಿನ ರೆಕ್ಕೆ ಎತ್ತಿದ ತಲೆಗೆ
ಬಂದ ಬಂದ ಸಂತಮ್ಮಣ್ಣ
ಕಸ್ತೂರಿ ಚಂದ್ರ ಹಣೆಯಲ್ಲಿಹುದು
ಸಂಜೆಯ ಶುಕ್ರ ಕಣ್ಣಲ್ಲಿಹುದು
ಬೆಳು ಬೆಳ್ದಿಂಗಳು ಗಲ್ಲದ ಮೇಲೆ
ಬಂದ ಬಂದ ಸಂತಮ್ಮಣ್ಣ
ಮೊದಲನೆ ಮಾತು ಹೂವಿನ ಮುತ್ತು
ಮರುಮಾತಾಡಲು ಸಿಡಿಲು ಗುಡುಗು
ಮೂರನೆ ಬಾರಿಗೆ ಆನೆಯ ಕಲ್ಮಳೆ
ಬಂದ ಬಂದ ಸಂತಮ್ಮಣ್ಣ
ಬಾರೋ, ಬಾರೋ, ಸಿಡಿಲಿನ ಮರಿಯೆ
ಬಾರೋ, ನಾಡಿನ ಸುಂಟರಗಾಳಿ!
ತೋರೋ ಸಿರಿಮೊಗ, ತುಂಟರ ಗುರುವೇ
ಬಂದ ಬಂದ ಸಂತಮ್ಮಣ್ಣ
-ಹೊಯ್ಸಳ (ಆರಗ ಲಕ್ಷ್ಮಣರಾಯ)
ಸಂಗ್ರಹ: ಶ್ರೀನಿಧಿ ಎನ್, ಬೆಂಗಳೂರು
Read Moreಬಣ್ಣದ ಜೊತೆಗಿನ ಬೇಸಿಗೆ ರಜೆ
ನೀವೂ ಬೇಸಿಗೆಯಲ್ಲಿ ಚಿತ್ರ ಬಿಡಿಸಿದ್ರಾ? ಕಿಂದರಜೋಗಿ ಮೂಲಕ ನಿಮ್ಮ ಗೆಳೆಯರಿಗೂ ತೋರಿಸಿ….
Read Moreಕೇಳಿದ್ದು ಸುಳ್ಳಾಗಬಹುದೂ
ಕೇಳಿದ್ದು ಸುಳ್ಳಾಗಬಹುದೂ ನೋಡಿದ್ದು ಸುಳ್ಳಾಗಬಹುದು
ನಿಧಾನಿಸೀ ಯೋಚಿಸಿದಾಗ ನಿಜವು ತಿಳಿವುದೂ
ಆ……ಆ…..ಆ….ಆ…..
ದೂರದೊಲ್ಲೊಂದೂ ಕಾಡಿತ್ತು ಕಾಡಲ್ಲಿ ಒಂದೂ ಮನೆಯಿತ್ತು
ಮುಂಗುಸಿಯೊಂದೂ ಅಲ್ಲಿತ್ತು ಮನೆಯನು ಕಾವಲು ಕಾಯ್ತಿತ್ತು
ಆ ಮನೆಯೊಡತಿ ಗಂಗಮ್ಮ ತೊಟ್ಟಿಲಲವಳಾ ಕಂದಮ್ಮಾ
ಮುಂಗುಸಿಯಲ್ಲದೆ ಬೇರೇನೂ ಮಗುವಿನ ಆಟಕೆ ಇಲ್ಲಮ್ಮಾ
ಮುಂಗುಸಿಯೊಡನೇ ಸ್ನೇಹದಲೀ ಕಂದನ ಜೊತೆಗೇ ಪ್ರೇಮದಲೀ
ಬಾಳುತಲಿದ್ದಳು ಗಂಗಮ್ಮಾ ಮುಂದೇನಾಯಿತು ಕೇಳಮ್ಮಾ…
ಮನೆಯಲಿ ನೀರೂ ಮುಗಿದಿರಲೂ ಹೊಳೆಯಾ ಕಡೆಗೇ ಹೊರಟಿರಲೂ
ಕಂದನು ಇನ್ನೂ ಮಲಗಿರಲೂ ಮುಂಗುಸಿಯನ್ನೂ ಕೂಗಿದಳೂ
ಮನೆಯಲಿ ಬೇರೇ ಯಾರಿಲ್ಲಾ ಮಗುವಿಗೇ ಯಾರೂ ಜೊತೆಯಿಲ್ಲಾ
ತೊಟ್ಟಿಲ ಬಳಿಯೇ ಕಾವಲಿರೂ ಹೊರಗಡೆ ಎಲ್ಲೂ ಹೋಗದಿರೂ
ಗಂಗೆಯು ಹೊಳೆಗೇ ಹೊರಟಾಗಾ ಬೇಲಿಯಲಿದ್ದಾ ಕರಿನಾಗಾ
ಸರಸರ ಹರಿಯಿತು ರಭಸದಲೀ ಮನೆಯನು ಸೇರಿತು ನಿಮಿಷದಲೀ
ಮುಂಗುಸಿ ನೋಡಿತು ಹಾವನ್ನೂ ತೊಟ್ಟಿಲ ಬಳಿಗೇ ಬರುವುದನೂ
ಮೇಲೇ ಬಿದ್ದಿತು ವೇಗದಲೀ ಕಾಳಗ ನಡೆಯಿತು ರೋಷದಲೀ
ಸೋತಿತು ಹಾವೂ ಜಗಳದಲೀ ಮುಂಗುಸಿ ಗೆಲುವಿನ ಹರುಷದಲೀ
ಹಾವಿನ ಪ್ರಾಣವ ಹೀರಿತ್ತು ಬಾಯಲಿ ರಕ್ತವು ಜಿನುಗಿತ್ತು
ಗಂಗೆಯು ನೀರನು ತರುತಿರಲೂ ಕೈಬಳೆ ನಾದವು ಕೇಳಿಸಲೂ
ಮುಂಗುಸಿ ಬಾಗಿಲ ಬಳಿಬರಲು ಬಾಯಲು ರಕ್ತದ ಕಲೆಯಿರಲೂ
ಬೆಚ್ಚುತ ಗಂಗೆಯು ನೋಡಿದಳೂ ಮಗುವನು ಕೊಂದಿದೆ ಇದು ಎಂದೂ
ಮುಂಗುಸಿಯನ್ನೂ ಚಚ್ಚಿದಳೂ ಅಳುತಾ ಒಳಗೇ ಓಡಿದಳೂ
ತೊಟ್ಟಲ ಕಂದನು ನಗುತಿತ್ತು ನೆಲದಲಿ ಹಾವೂ ಸತ್ತಿತ್ತೂ
ದುಡುಕಿನ ಬುದ್ದಿಗೆ ಬಲಿಯಾಗೀ ಮುಂಗುಸಿ ಕಥೆಯೂ ಮುಗಿದೆತ್ತೂ…
ಕೇಳಿದ್ದೂ ಸುಳ್ಳಾಗಬಹುದೂ ನೋಡಿದ್ದೂ ಸುಳ್ಳಾಗಬಹುದೂ
ನಿಧಾನಿಸೀ ಯೋಚಿಸಿದಾಗಾ ನಿಜವು ತಿಳಿವುದೂ…..
ಚಿತ್ರ : ರಾಮ ಲಕ್ಷ್ಮಣ (1980)
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಜಾನಕಿ